ಚಿಕ್ಕಮಗಳೂರು : ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಗುಡ್ಡ ಕುಸಿತ, ರಸ್ತೆ ಮೇಲೆ ಮರ ಬೀಳುವ ಘಟನೆಗಳು ಹೆಚ್ಚುತ್ತಿದ್ದು ಭಾರೀ ಆತಂಕ ಶುರುವಾಗಿದೆ. ಈ ನಡುವೆ ಚಿಕ್ಕಮಗಳೂರಲ್ಲಿ ಲಾರಿ ಚಾಲಕನೊಬ್ಬ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಲಾರಿ ಪ್ರಪಾತಕ್ಕೆ ಬಿದ್ದರೂ ಅದೃಷ್ಟವೆಂಬಂತೆ ಚಾಲಕ ಬದುಕುಳಿದಿದ್ದಾನೆ. ದುರ್ಘಟನೆಯಲ್ಲಿ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಶೃಂಗೇರಿ ನೆಮ್ಮಾರು ಬಳಿ ರಸ್ತೆ ಲಾರಿ ಪ್ರಪಾತಕ್ಕೆ ಕುಸಿದು ಬಿದ್ದಿದೆ. ನಿರಂತರ ಮಳೆಗೆ ನೆಮ್ಮಾರು ಸಮೀಪದ ರಸ್ತೆ ಕುಸಿದು ಅನಾಹುತ ಸಂಭವಿಸಿದೆ.
ಸದ್ಯ ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸುಮಾರು 50 ಅಡಿ ಆಳಕ್ಕೆ ಲಾರಿ ಬಿದ್ದಿದ್ದು, ಅದನ್ನು ಮೇಲೆತ್ತುವ ಸಾಹಸ ನಡೆಯುತ್ತಿದೆ.