ರಾಮನಗರ : ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಮಾಗಡಿ ಪಟ್ಟಣದ ಜ್ಯೋತಿ ನಗರದಲ್ಲಿ ನಡೆದಿದೆ.
ಶೋಭ (38), ದಿಲೀಪ್ (16) ಮೃತರು. ಮನೆಯಲ್ಲಿ ಸ್ನಾನ ಮಾಡಲು ಅಂತ ದಿಲೀಪ್ ಹೋಗಿದ್ದ ವೇಳೆ ಗೀಸರ್ ಅನಿಲ ಸೋರಿಕೆಯಾಗಿದೆ.
ಸೋರಿಕೆಯಾದ ಅನಿಲ ಸೇವಿಸಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ನಾನ ಮಾಡಲು ಹೋದ ದಿಲೀಪ್ ಸಾಕಷ್ಟು ಸಮಯ ಕಳೆದರೂ ಹೊರ ಬಾರದ ಹಿನ್ನೆಲೆಯಲ್ಲಿ ತಾಯಿ ಕೂಡ ಒಳಗಡೆ ಹೋಗಿದ್ದಾಳೆ. ಇದೇ ವೇಳೆ ಗೀಸರ್ ಗ್ಯಾಸ್ ಗಾಳಿ ಸೇವಿಸಿ ತಾಯಿ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮಾಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























