ಬೆಳ್ತಂಗಡಿ : ಹಿಂದೆಂದೂ ಕಾಣದಂತ ಸುಂಟರಗಾಳಿಯೊಂದು ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಪ್ರೌಢ ಶಾಲೆ ಪರಿಸರದಲ್ಲಿ ಅಪ್ಪಳಿಸಿದ್ದು, ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಮನೆಯ ಮೇಲೆಯೇ ಬಿದ್ದು ಅಪಾರ ನಷ್ಟ ಉಂಟಾಗಿದೆ.
ನೇಲ್ಯಡ್ಕದ ಕೆ.ವಿ.ಅಬ್ರಹಾಂ ಅವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದ್ದು, ಮನೆಯವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ ವೇಳೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯುಂಟಾಗಿದೆ. ಬೆಳ್ತಂಗಡಿ ಭಾಗದಲ್ಲಿ ಬಿರುಸಿನ ಗಾಳಿ ಮಳೆಯಾಗಿದ್ದು, ರೆಖ್ಯಾ ಪರಿಸರದಲ್ಲಿ ಹಿಂದೆಂದೂ ಕಾಣದಂತ ಸುಂಟರಗಾಳಿ ಅಪ್ಪಳಿಸಿದ್ದು, ಜನರು ಆತಂಕಗೊಂಡಿದ್ದರು.