ಪುತ್ತೂರು: ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೇ ಬೇಕು ಎಂದು ಆಗ್ರಹಿಸಿ ನ.23 ರಂದು ಪುತ್ತೂರಿನಲ್ಲಿ ನಡೆಯಲಿರುವ ಸಮಾನ ಮನಸ್ಕರ ಚರ್ಚಾ ಕೂಟದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವಂತೆ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮನವಿ ಮಾಡಿದ್ದಾರೆ.ಬನ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಕಾಯ್ದಿರಿಸಿರುವಜಾಗವನ್ನು ಇದೀಗ ಸರಕಾರ ಸೀ ಫುಡ್ ಪಾರ್ಕ್ ಗೆಮೀಸಲಿಟ್ಟ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಸಭೆಕರೆಯಲಾಗಿದೆ.
ನ.23ರಂದು ಸೋಮವಾರ ಅಪರಾಹ್ನ 2 ಗಂಟೆಗೆ ಮನೀಷಾ ಸಭಾಂಗಣದಲ್ಲಿ ಸಭೆ ಕರೆಯಲಾಗಿದ್ದು, ಬಹುದಿನಗಳ ಕನಸಾಗಿರುವ ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ ಬೇಕೇ ಬೇಕು ಎನ್ನುವ ನಿಟ್ಟಿನಲ್ಲಿ ಸಮಾನ ಮನಸ್ಕರು ಪಕ್ಷಾತೀತವಾಗಿ ಸಾರ್ವಜನಿಕರು ಸಭೆಗೆ ಹಾಜರಾಗಿ ಸೂಕ್ತ ಸಲಹೆ ಸೂಚನೆಗಳೊಂದಿಗೆ ಚರ್ಚಾ ಕೂಟದಲ್ಲಿ ಭಾಗವಹಿಸುವಂತೆ ಶಕುಂತಳಾ ಟಿ.ಶೆಟ್ಟಿರವರು ತಿಳಿಸಿದ್ದಾರೆ.