ಪುತ್ತೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ 11 ಯಕ್ಷಗಾನ ಮೇಳದ ಕಲಾ ರಂಗದ ನೇಪತ್ಯ ಕಲಾ ಕುಟುಂಬಗಳಿಗೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಉದ್ಯಮಿ ಸಹಜ್ ರೈ ಬಳಜ್ಜ ಅವರು ಅಗತ್ಯ ಆಹಾರದ ಕಿಟ್ ಗಳನ್ನು ವಿತರಿಸಿದರು.
ಜೂ.೬ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷಗಾನದ ತೆರೆಮರೆಯಲ್ಲಿ ಶ್ರಮಿಸುತ್ತಿರುವ ನೇಪತ್ಯ ಕಲಾವಿದರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.
ನಗರಸಭಾ ಅಧ್ಯಕ್ಷ ಕೆ ಜೀವಂದರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯ ರಾಮದಾಸ್ ಗೌಡ ಅವರು ಸಾಂಕೇತಿಕವಾಗಿ ದೇತಂಡ್ಕ ಮೇಳದ ಕಲಾವಿರಿಗೆ ಕಿಟ್ ಹಸ್ತಾಂತರಿಸಿದರು. ಉಳಿದ ಕಲಾವಿದರಿಗೆ ಆಯಾ ನೇಮಪತ್ಯ ಕಲಾವಿದರ ಮನೆಗಳಿಗೆ ತೆರಳಿ ಕಿಟ್ ವಿತರಣೆ ಮಾಡಲಾಗುವುದು ಎಂದು ಉದ್ಯಮಿ ಸಹಜ್ ರೈ ಬಳಜ್ಜ ಅವರು ತಿಳಿಸಿದರು.
ಯಕ್ಷಗಾನ ಹಿರಿಯ ಕಲಾವಿದ ದಿ.ಶ್ರೀಧರ್ ಭಂಡಾರಿ ಅವರ ಪುತ್ರ ದೇವಿಪ್ರಕಾಶ್ ಭಂಡಾರಿ, ಸುಬ್ಬು ಸಂಟ್ಯಾರ್, ಶರತ್ ಆಳ್ವ, ಆದರ್ಶ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಫಲಾನುಭವಿಗಳಿಗೆ ಬಿಲ್ವಪತ್ರೆ ಗಿಡಗಳನ್ನು ವಿತರಣೆ ಮಾಡಲಾಯಿತು.