ವಿಟ್ಲ : ಬಿಜೆಪಿ ಮುಖಂಡ ಮಾಧವ ಮಾವೆ ರವರ ತಂದೆ, ಮಲಾರು ಸುಂದರ ಸಪಲ್ಯ (94) ನಿಧನರಾದರು.
ಸುಂದರ ಸಪಲ್ಯ ರವರು ಮಲಾರು, ಮಾವೆ, ಸಾಲೆತ್ತೂರು ಪರಿಸರದವರಿಗೆ ಅಚ್ಚುಮೆಚ್ಚಿನವರಾಗಿದ್ದು, ಭಜನೆ ಮತ್ತು ಧಾರ್ಮಿಕ ಕ್ಷೇತ್ರದ ಮೂಲಕ ಎಲ್ಲರ ಮನೆ ಮಾತಾಗಿದ್ದರು.
ಮೃತರು ಪತ್ನಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಪಾಲ್ತಾಜೆಯ ಅವರ ನಿವಾಸದಲ್ಲಿ ನೆರವೇರಲಿದೆ ಕುಟುಂಬ ಮೂಲಗಳು ತಿಳಿಸಿವೆ.