ಪುತ್ತೂರು : 2024-25ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯಿಂದ ಪುತ್ತೂರಿನ ಸಂತ ವಿಕ್ಟರ್ಸ್ ಬಾಲಿಕ ಪ್ರೌಢ ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸಾಂದೀಪನಿ ವಿದ್ಯಾರ್ಥಿಗಳಾದ 17ರ ವಯೋಮಾನದ ವಿಭಾಗದ ವಿದ್ಯಾರ್ಥಿಗಳಾದ ಭುವನ್ ಕರಂದ್ಲಾಜೆ, ವೈಭವಿ ಲಕ್ಷ್ಮಿ, ಅಜಯ್ ಕೃಷ್ಣ, ಧನ್ವಿನ್ ಹಾಗೂ 14 ರ ವಯೋಮಾನದ ವಿಭಾಗದ ವಿದ್ಯಾರ್ಥಿಗಳಾದ ತುಷಾರ್, ಅಭೀಶ್ ರೈ, ಪೃಥ್ವಿ ಕೃಷ್ಣ , ಜ್ಞಾನ ರೈ , ಧೃತಿ ಎಮ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಜಯಮಾಲಾ ವಿ ಎನ್ ಹಾಗೂ ತರಬೇತುದಾರರಾದ ನಾರಾಯಣ ಆಚಾರ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.