ಪುತ್ತೂರು : ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವಿವೇಕಾನಂದ ಶಿಶು ಮಂದಿರ ಪರ್ಲಡ್ಕ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಜಂಟಿ ಆಶ್ರಯದಲ್ಲಿ ನಡೆಯುವ 26ನೇ ವರ್ಷದ ಶ್ರೀ ಕೃಷ್ಣ ಲೋಕ ಕಾರ್ಯಕ್ರಮದ ನಿಮಿತ್ತ ನಡೆಯುತ್ತಿರುವ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಅಂತಿಮ ಹಂತದ ಸ್ಪರ್ಧಾ ಕಾರ್ಯಕ್ರಮ ವಿವೇಕಾನಂದ ಶಿಶು ಮಂದಿರದ ಪರ್ಲಡ್ಕದಲ್ಲಿ ನಡೆಯಿತು.
ರಾಜಗೋಪಾಲ ಶರ್ಗಿತ್ತಾಯ ರಂಜಿನಿ ದಂಪತಿಗಳು ಪಾಂಗಲಾಯಿ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಪರ್ಲಡ್ಕದಲ್ಲಿ ವಿಶಾಲವಾದ ಶಿಶು ಮಂದಿರವು ಪ್ರಾರಂಭ ಆಗಿರುವುದು ತುಂಬಾ ಸಂತೋಷದ ವಿಚಾರ ಈ ರೀತಿಯ ಸ್ಪರ್ಧಾ ಕಾರ್ಯಕ್ರಮ ಮಾಡುತ್ತಿರುವುದು ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುತ್ತದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಶ್ವ ಹಿಂದೂ ಪರಿಷತ್ತಿನ ಪುತ್ತೂರು ನಗರ ಪ್ರಖಂಡದ ಅಧ್ಯಕ್ಷ ದಾಮೋದರ ಪಾಟಾಳಿ ಮಾತನಾಡಿ, ಶಂಖನಾದ, ಭಜನೆ, ತಾಳನಾದ, ಭಗವದ್ಗೀತಾ ಕಂಠಪಾಠ ಇತ್ಯಾದಿ ಸ್ಪರ್ಧಾ ಕಾರ್ಯಕ್ರಮ ಕೇವಲ ಬಹುಮಾನಕ್ಕಾಗಿ ಅಲ್ಲವೇ ಅಲ್ಲ
ಎಳೆಯ ಪ್ರಾಯದಲ್ಲಿ ಮಕ್ಕಳು ಈ ವಿಚಾರದಲ್ಲಿ ಆಸಕ್ತಿ ವಹಿಸಿ ಸನಾತನ ಧರ್ಮದ ಈ ಅಪೂರ್ವ ಕೊಡುಗೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಎಲ್ಲರೂ ಪ್ರಯೋಜನ
ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷರಾದ ಸಂತೋಷ ಕುಮಾರ್ ರೈ ಸ್ವಾಗತಿಸಿದರು. ಗೌರವ ಅಧ್ಯಕ್ಷರಾದ ರಾಜೀಬಲರಾಮ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ರಮ್ಯಾ ಕಾರ್ಯಕ್ರಮ ನಿರೂಪಣೆ ಮಾಡಿದರು.
ಪ್ರದಾನ ಕಾರ್ಯದರ್ಶಿ ಕುಮಾರಿ ಮೇಘನಾ ಪಾಣಾಜೆ ಉಪಸ್ಥಿತರಿದ್ದರು. ಸ್ಪರ್ಧಾ ಸಹ ಸಂಚಾಲಕರಾದ ವೀಣಾಸರಸ್ವತಿ ಧನ್ಯವಾದ ಸಮರ್ಪಣೆ ಮಾಡಿದರು. ಅಂತಿಮ ಸುತ್ತಿನ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ 175 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.