ವಿಟ್ಲ : ಹಲವು ದಿನಗಳಿಂದ ರಸ್ತೆಯಲ್ಲಿರುವ ಸೋಲಾರ್ ಲೈಟ್ ಹಾಳಾಗಿದ್ದು, ರಾತ್ರಿ ವೇಳೆ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿರುವ ಘಟನೆ ಪೆರುವಾಯಿ ಜಂಕ್ಷನ್ ನಲ್ಲಿ ಸಂಭವಿಸುತ್ತಿರುವ ಬಗ್ಗೆ ವರದಿಯಾಗಿದೆ.
ವಿಟ್ಲ ಸಮೀಪದ ಪೆರುವಾಯಿ ಜಂಕ್ಷನ್ ನಲ್ಲಿ ಸೋಲಾರ್ ಲೈಟ್ ಸುಮಾರು ನಾಲ್ಕು ತಿಂಗಳಿನಿಂದ ಉರಿಯುತ್ತಿಲ್ಲ. ಆದರೇ ಈ ಬಗ್ಗೆ ಪಂಚಾಯತ್ ಹಾಗೂ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಯಾರೂ ಕೂಡ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಭಾಗದಲ್ಲಿ ರಾತ್ರಿ ವೇಳೆ ತೆರಳುವ ವಾಹನ ಸವಾರರಿಗೆ ಹಾಗೂ ಸ್ಥಳೀಯ ಪಾದಚಾರಿಗಳಿಗೆ ಸೋಲಾರ್ ಲೈಟ್ ಇಲ್ಲದೆ ಸಂಕಷ್ಟವಾಗುತ್ತಿದ್ದು, ರಾತ್ರಿ ವೇಳೆ ಕಗ್ಗತ್ತಲಿನಲ್ಲಿಯೇ ಓಡಾಡುವ ಸ್ಥಿತಿ ಎದುರಾಗಿದೆ.
ಈ ಬಗ್ಗೆ ಸಂಬಂಧಪಟ್ಟವರು ಶೀಘ್ರ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


























