ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಮತ್ತು ವರಮಹಾಲಕ್ಷ್ಮೀ ಪೂಜಾ ಸಮಿತಿ, ಪುತ್ತೂರು ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತಪೂಜೆ ಆ.16 ರಂದು ಮುಕ್ರಂಪಾಡಿಯ ಸುಭದ್ರಾ ಕಲಾ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ ಭಜನೆ ಬಳಿಕ ಮಹಾಲಕ್ಷ್ಮೀ ವ್ರತಪೂಜೆ, ನಂತರ ಧಾರ್ಮಿಕ ಸಭೆ ನಡೆಯಲಿದೆ.
ವ್ಯಕ್ತಿ ವಿಕಸನ ತರಬೇತುದಾರರು, ಉಪನ್ಯಾಸಕರಾದ ಡಾ. ಅನುರಾಧ ಕುರುಂಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.


























