ಪುತ್ತೂರು : ಶಿವಾಜಿ ಯುವಕ ಮಂಡಲ (ರಿ) ನೆಹರು ನಗರ ಕಲ್ಲೇಗ ಆಶ್ರಯದಲ್ಲಿ 49ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಲ್ಲೇಗ ಮೊಸರು ಕುಡಿಕೆ ಉತ್ಸವ-2024 ಸೆ.1ರಂದು ಭಾರತ್ ಮಾತಾ ಸಮುದಾಯ ಭವನ ಕಲ್ಲೇಗದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಕಲ್ಲೇಗ ದೈವಸ್ಥಾನದಲ್ಲಿ ಕಲ್ಲೇಗ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಜೀವಂಧರ್ ಜೈನ್, ಅಜಿತ್ ಜೈನ್, ಸಂಜೀವ ನಾಯಕ್ ಸೇರಿದಂತೆ ಶಿವಾಜಿ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


























