ಬೆಳ್ತಂಗಡಿ : ಬೈಕ್ ಮತ್ತು ಪಿಕಪ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಲೆಬೆಟ್ಟು ನಿನ್ನಿಕಲ್ಲು ರಸ್ತೆ ಬಳಿ ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ, ಗುರುವಾಯನಕೆರೆ ಖಾಸಗಿ ಕಾಲೇಜು ವಿದ್ಯಾರ್ಥಿ, ಬೆಳಾಲು ಗ್ರಾಮದ ಮಂಜೂತ್ತು ಉಮೇಶ್ ಎಂ.ಜಿ. ಯವರ ಪುತ್ರ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.


























