ಪುತ್ತೂರು : ಯೂತ್ ಕಾಂಗ್ರೆಸ್ ನ ಹಾಲಿ ಪದಾಧಿಕಾರಿಗಳ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಆನ್ ಲೈನ್ ಮೂಲಕ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಆ.16ರಿಂದ ಯೂತ್ ಕಾಂಗ್ರೆಸ್ ವೋಟಿಂಗ್ ಪ್ರಾರಂಭವಾಗಲಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಹಮ್ಮದ್ ಸೆಮಿ ಕೆ, ಇಬ್ರಾಹಿಂ ಭಾತಿಷಾ, ಜಗದೀಶ್ ಕೆ, ಮಹಮ್ಮದ್ ಫಾರೂಕ್, ಮಹಮ್ಮದ್ ಶಾಲಿಕ್ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಇಬ್ರಾಹಿಂ ಭಾತಿಷಾ ರವರ ನಾಮಪತ್ರ ತಿರಸ್ಕ್ರತಗೊಂಡಿದೆ.
ಪುತ್ತೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ರಹಿಮಾನ್, ಅಖಿಲ್ ವೈ, ಆಶಿಕ್ ಎಸ್., ಮೊಹಮ್ಮದ್ ಉಸೈನ್, ನವೀನ್ ಕುಮಾರ್ ನಾಮಪತ್ರ ಸಲ್ಲಿಸಿದ್ದು, ಆಶಿಕ್ ಎಸ್. ರವರ ನಾಮಪತ್ರ ತಿರಸ್ಕ್ರತಗೊಂಡಿದೆ.
ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಅಧ್ಯಕ್ಷ ಪಟ್ಟ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.
ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಗಳಿಗೆ ಸಲ್ಲಿಸಿದ್ದ ನಾಮಪತ್ರ ತಿರಸ್ಕ್ರತಗೊಂಡ ಅಭ್ಯರ್ಥಿಗಳಾದ ಆಶಿಕ್ ಸಂಪ್ಯ, ಭಾತೀಷ್ ಅಳಕೆಮಜಲು ಪರ ಟ್ವೀಟ್ ಅಭಿಯಾನ ಪ್ರಾರಂಭವಾಗಿದ್ದು, ಯಾವುದೇ ಕಾರಣ ನೀಡದೇ ನಾಮಪತ್ರ ತಿರಸ್ಕ್ರರಿಸಲಾಗಿದೆ ಎಂದು ಆರೋಪಿಸಲಾಗಿದೆ.