ವಿಟ್ಲ : ಅಂಗಡಿಗೆ ತೆರಳಿದ್ದ ಬಾಲಕಿಯೊಬ್ಬಳಿಗೆ ಅಂಗಡಿ ಮಾಲಕ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲದ ಕುದ್ದು ಪದವಿನ ಅಂಗಡಿಯೊಂದಕ್ಕೆ ಬಾಲಕಿ ತೆರಳಿದ್ದು, ಆ ವೇಳೆ ಅಂಗಡಿಯ ಮಾಲಕ ಅಶ್ರಫ್ ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.



























