ಅಂಕೋಲಾ : ಶಿರೂರು ಗುಡ್ಡಕುಸಿತ ಪ್ರಕರಣ ಸಂಭವಿಸಿ ಇಂದಿಗೆ 30 ದಿನ. ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ, ಲೋಕೇಶ್ ಮೃತದೇಹ ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ನಿನ್ನೆ ಎರಡನೇಯ ಹಂತದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮುಳುಗು ತಜ್ಞ ಈಶ್ವರ್ ಮಲ್ಪೆಯವರು ನೀರಿನಾಳಕ್ಕೆ ಇಳಿದು ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ಕುರುಹುಗಳು ಪತ್ತೆಯಾಗಿವೆ.
ಗಂಗಾವಳಿ ನದಿಯ ಹರಿವು ಕಡಿಮೆಯಾಗಿರುವ ಹಿನ್ನಲೆ ನಿನ್ನೆ ಶೋಧ ಕಾರ್ಯ ಪುನರಾರಂಭಿಸಿದ್ದಾರೆ. ಈಶ್ವರ್ ಮಲ್ಪೆ ತಂಡದಿಂದ ಅರ್ಜುನ್ ಲಾರಿಗಾಗಿ ಹುಡುಕಾಟ ನಡೆದಿದೆ. ಈ ವೇಳೆ ಲಾರಿಯ ವೀಲ್ ಜಾಕ್ ಈಶ್ವರ್ ಮಲ್ಪೆಗೆ ಸಿಕ್ಕಿದೆ. ಮಾತ್ರವಲ್ಲದೆ, ಲಾರಿಯ ಪಾರ್ಟ್ ಒಂದು ಸಿಕ್ಕಿದೆ.
ಇಂದು ಸಹ ಗಂಗಾವಳಿ ನದಿಯಲ್ಲಿ ಶೋಧ ಮುಂದುವರೆಯಲಿದೆ. NDRF, SDRF, ನೌಕಾನೆಲೆ ತಂಡದಿಂದಲೂ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
ಶಾಸಕ ಸತೀಶ್ ಸೈಲ್ ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಮುಂದುವರೆಸುವುದಾಗಿ ತಿಳಿಸಿದ್ದು, ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌ಗಾಗಿ ಶೋಧ ಇಂದು ಕೂಡ ನಡೆಯಲಿದೆ ಎಂದಿದ್ದಾರೆ.



























