ಉತ್ತರ ಪ್ರದೇಶ : ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನೊಬ್ಬ ಸರಸದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೋವಾ ಕಾರಿನೊಳಗೆ ಇಬ್ಬರು ಮಹಿಳೆಯರನ್ನು ತಬ್ಬಿಕೊಳ್ಳುತ್ತಾ ಯುವಕ ಎಂಜಾಯ್ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದ ಲಕ್ನೋ-ಅಯೋಧ್ಯೆ ಎನ್ಎಚ್ 27 ರಲ್ಲಿ ನಡೆದಿದೆ.
ಸಿಟಿ ಕೊಟ್ವಾಲಿ ಪ್ರದೇಶದ ವ್ಯಾಪ್ತಿಯಲ್ಲಿರುವ ಸಫೇದಾಬಾದ್‌ನಲ್ಲಿರುವ ಕಾಳಿಕಾ ಹವೇಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಇನ್ನೋವಾ ಕಾರಿನೊಳಗಿನ ಯುವಕನ ಸರಸ ಸಲ್ಲಾಪದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ಫೋನ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳಲಾಗಿದ್ದು, ಆಗಸ್ಟ್ 12ರಂದು ಹಂಚಿಕೊಂಡಿರುವ ಈ ವೀಡಿಯೋ ಎರಡೇ ದಿನದಲ್ಲಿ 6ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಬಾರಾಬಂಕಿ ಪೊಲೀಸರು ಎನ್ಎಚ್ -27ರ ರೆಸ್ಟೋರೆಂಟ್ ಮುಂದೆ ಈ ಘಟನೆ ನಡೆದಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೃಢಪಡಿಸಿದ್ದಾರೆ.



























