ವಿಟ್ಲ : ಅಂಗಡಿಗೆ ತೆರಳಿದ್ದ ಬಾಲಕಿಯೊಬ್ಬಳಿಗೆ ಅಂಗಡಿ ಮಾಲಕ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲದ ಕುದ್ದು ಪದವಿನಲ್ಲಿರುವ ಅಂಗಡಿ ಮಾಲಕ ಅಶ್ರಫ್ ಬಂಧಿತ.
ಕುದ್ದು ಪದವಿನ ಅಂಗಡಿಯೊಂದಕ್ಕೆ ಬಾಲಕಿ ತೆರಳಿದ್ದು, ಆ ವೇಳೆ ಅಂಗಡಿಯ ಮಾಲಕ ಅಶ್ರಫ್ ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


























