ವಿಟ್ಲ : ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ (ರಿ.) ಗಾಂಧಿನಗರ, ಮಂಗಳೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು, ಮಾಣಿಲ ಘಟಕ. ಇವರ ಸಹಯೋಗದೊಂದಿಗೆ. ನಿಟ್ಟೆ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇವರ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಸಮುದಾಯ ದಂತ ವಿಭಾಗ, ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವದಲ್ಲಿ ಜರುಗಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತಿಲ ಪರಿವಾರ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಮುಖ್ಯ ಅತಿಥಿಗಳಾಗಿ ನಿರಂಜನ ಹೆಬ್ಬಾರ್, ಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಪದಾಧಿಕಾರಿ ದೇವಾನಂದ ರೈ, ಸಂಚಾಲಕರಾದ ಸತ್ಯಸಾಯಿ ಸೇವಾ ಸಮಿತಿ, ಭರತ್ ಪಿ.ಆರ್.ಓ, ಯೇನೆಪೊಯ ಡೆಂಟಲ್ ಆಸ್ಪತ್ರೆ ಸಮುದಾಯ ವಿಭಾಗ, ಡಾ. ವಿನು ಜೋಸೆಪ್, ಲೆಕ್ಚರರ್ ಯೇನೆಪೊಯ ಡೆಂಟಲ್ ಆಸ್ಪತ್ರೆ, ಜೈಸನ್ ಮಾರ್ಕೆಟಿಂಗ್ ಆಫೀಸರ್ ನಿಟ್ಟೆ, ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಯಂ ಮಹಾಬಲ ಭಟ್. ಸಾಮಾಜಿಕ ಮುಂದಾಲು, ಪುತ್ತಿಲ ಪರಿವಾರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಟ್ರಸ್ಟಿನ ಪ್ರಮುಖರಾದ ರಘುನಾಥ್ ರೈ ವಿಟ್ಲ, ಹರೀಶ್ ಮರುವಾಳ ಉಪಸ್ಥಿತರಿದ್ದರು.

ಗಣೇಶ್ ಕುಮಾರ್ ದೇಲಂತಮಜಲು ಸ್ವಾಗತಿಸಿದರು. ಪವನ ಕೃಷ್ಣ ದೇಲಂತಮಜಲು ಪ್ರಾರ್ಥಿಸಿದರು. ಎಸ್ ನಾರಾಯಣ ಮಾಣಿಲ. ಧನ್ಯವಾದ ಅರ್ಪಿಸಿದರು. 242 ಜನ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. 136 ಉಚಿತ ಕನ್ನಡಕ್ಕ ವಿತರಣೆ ಮಾಡಲಾಯಿತು.ಯುವಕರಿಗೆ ತಂಬಾಕು ಮತ್ತು ಪಾನ್ ಗುಟ್ಕ ಸೇವನೆಯಿಂದ ಬರುವ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್ (ರಿ).ಮಾಣಿಲ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.




























