ಪುತ್ತೂರು : ಹಲವು ರಾಜಕೀಯ ನಾಯಕರು ತಮಗೆ ಉನ್ನತ ಸ್ಥಾನ ಬೇಕು ಎಂದು ಪಟ್ಟು ಹಿಡಿಯುವ ಘಟನೆಗಳು ಆಗಾಗ್ಗೇ ನಡೆಯುತ್ತಿದ್ದು, ಪುತ್ತೂರಿನ ಯುವ ನಾಯಕ ಸಹಜ್ ರೈ ಬಳಜ್ಜ ಅವರು ನನಗೆ ಯಾವುದೇ ರೀತಿಯ ಜವಾಬ್ದಾರಿ ಬೇಡ, ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಪತ್ರ ಬರೆದಿರುವ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಪ್ರಶಂಸಿಸಿದ ಘಟನೆ ನಡೆದಿದೆ.
ನನಗೆ ಯಾವುದೇ ಜವಾಬ್ದಾರಿ ಬೇಡ ಕಾರ್ಯಕರ್ತನಾಗಿ ಇರುತ್ತೇನೆಂದ ಏಕೈಕ ವ್ಯಕ್ತಿ ಸಹಜ್ ರೈ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಹಜ್ ರೈ ಬಳಜ್ಜ ರವರ ಬಗ್ಗೆ ಮೆಚ್ವುಗೆ ವ್ಯಕ್ತ ಪಡಿಸಿದರು.
ತಿಂಗಳ ಹಿಂದೆ ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರದಲ್ಲೇನಿತ್ತು…!!!!???
ಪುತ್ತೂರು ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪುತ್ತೂರು ಮಂಡಲ ಅಧ್ಯಕ್ಷತೆಗೆ ನನ್ನ ಹೆಸರು ಕೂಡ ಶಿಫಾರಸು ಆಗಿರುತ್ತದೆ ಎಂದು ತಿಳಿದಿರುತ್ತದೆ. ಆದರೆ ನಾನು ನನ್ನ ಉದ್ಯಮದ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ನನಗೆ ಪಕ್ಷದ ಕೆಲಸಕ್ಕೆ ಸಮಯಕ್ಕೆ ಕೊಡಲು ಕಷ್ಟವಾಗುತ್ತದೆ. ನನ್ನ ಹೆಸರನ್ನು ಮಂಡಲ ಅಥವಾ ಯಾವುದೇ ಜವಾಬ್ದಾರಿಗೆ ಪರಿಗಣಿಸಬಾರದಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ.
ನಾನು ನನ್ನ ಕೈಯಿಂದಾಗುವಷ್ಟರ ಮಟ್ಟಿಗೆ ಪಕ್ಷದ ಚಟುವಟಿಕೆಯಲ್ಲಿ ಓರ್ವ ಕಾರ್ಯಕರ್ತನಾಗಿ ತೊಡಗಿಸಿಕೊಳ್ಳುವುದಾಗಿ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು 20/06/2024 ರಂದು ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಸಹಜ್ ರೈ ಬಳಜ್ಜ ಅವರು ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


























