ಬಂಟ್ವಾಳ : ವ್ಯಕ್ತಿಯೋರ್ವರನ್ನು ತಂಡವೊಂದು ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ದೋಚಿದ ಕುರಿತು ನೀಡಿರುವ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿರಾಜಪೇಟೆ ನಿವಾಸಿ ಗಂಗಾಧರ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಗಂಗಾಧರ ಅವರು ಆ.9 ರಂದು ಮನೆಯಿಂದ ಬಿ.ಸಿ.ರೋಡ್ ಗೆ ಬಂದಿದ್ದು, ಆದಿನ ರಾತ್ರಿ ಅಲ್ಲಿಂದ ಬಂಟ್ವಾಳ ನರಿಕೊಂಬುನಲ್ಲಿರುವ ಅಣ್ಣನ ಮನೆಗೆ ಹೋಗಲು ವಾಹನಕ್ಕಾಗಿ ಬಿ.ಸಿ.ರೋಡ್ ನಲ್ಲಿ ಕಾಯುತ್ತಿರುತ್ತಾರೆ. ಈ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರು, ತಾವುಗಳು ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದು, ಬರುವಂತೆ ತಿಳಿಸಿರುತ್ತಾರೆ. ಅದರಂತೆ ಗಂಗಾಧರ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದು, ಕಾರು ಸ್ವಲ್ಪ ಮುಂದೆ ಚಲಿಸಿದಾಗ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತರು ಗಂಗಾಧರ ಅವರಿಗೆ ಕಾರಿನೊಳಗೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ರೂ.2,000/- ನಗದು ಹಣವನ್ನು ಕಸಿದುಕೊಂಡಿದ್ದು, ಬಳಿಕ ಕಾರಿನಿಂದ ದೂಡಿ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಆ.14 ರಂದು ನೀಡಿದ ದೂರಿನ ಮೇರೆಗೆ ಅ.ಕ್ರ:138/2024 ಕಲಂ:309 (4) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























