ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ, ಪುಸ್ತಕ ಪ್ರದರ್ಶನ ಮತ್ತು ಡಿಜಿಟಲ್ಲೈಬ್ರರಿ ಉದ್ಘಾಟನೆಯು ಆಂತರಿಕ ಗುಣಮಟ್ಟದ ಭರವಸೆ ಕೋಶದ ಸಹಭಾಗಿತ್ವದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು.

ಪ್ರಸ್ತುತ ಸಾಕಷ್ಟು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುತ್ತದೆ ಆದರೆ ಸಾಮಾಜಿಕಜಾಲತಾಣದ ಅತಿಯಾದ ಬಳಕೆ ಅಷ್ಟೇ ದುಷ್ಪರಿಣಾಮಗಳನ್ನು ಬೀರುತ್ತದೆ. ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಓದುವಿಕೆ ವ್ಯಕ್ತಿಯ ಚಿಂತನಾ ಮಟ್ಟವನ್ನು ವಿಕಸಿತಗೊಳಿಸಿ, ಅರಿವಿನ ದಾಹವನ್ನು ಹೆಚ್ಚಿಸಿ ವಿದ್ವಾಂಸರನ್ನಾಗಿ ಮಾಡುತ್ತದೆ. ಕಾರ್ಯಕ್ರಮದಲ್ಲಿ ಡಿಜಿಟಲ್ಲೈಬ್ರರಿಗೆ ಚಾಲನೆ ಕೊಟ್ಟು ಡಿಜಿಟಲ್ಗ್ರಂಥಾಲಯದಿಂದ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ವಿವಿಧ ಕೆಲಸಕಾರ್ಯಗಳ ಬಿಡುವಿನ ಸಮಯದಲ್ಲೂ ವಿವಿಧ ಎಲೆಕ್ಟ್ರಾನಿಕ್ಸ್ಗ್ಯಾಜಾಟ್ಗಳ ಮೂಲಕ ಓದಿ ತಿಳಿಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳರವರು ಪ್ರಾಸ್ತಾವಿಕವಾಗಿ ಮಾತನಾಡಿ‘ದೇಶ ಸುತ್ತು ಕೋಶ ಓದು’ಎನ್ನುವುದು ನಮ್ಮ ಹಿರಿಯರ ನಾಣ್ಣುಡಿ, ಹೊರ ಪ್ರಪಂಚವನ್ನು ಪ್ರವಾಸ ಮಾಡಿ ಮತ್ತು ಪುಸ್ತಕಗಳನ್ನು ಓದಿ ಸಾಕಷ್ಟು ಜ್ಞಾನಗಳಿಸಬಹುದು ಎಂಬುದು ತಾತ್ಪರ್ಯ. ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳು ಲಭ್ಯವಿರುತ್ತದೆ ಮತ್ತು ಹೊಸ ಆವೃತ್ತಿಯ ಪುಸ್ತಕಗಳನ್ನು ನಮ್ಮಗ್ರಂಥಾಲಯಕ್ಕೆ ಸೇರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಧೀರಜ್ದಾಸ್ managing partner edwiselearn ಇವರು ಡಿಜಿಟಲ್ಲೈಬ್ರರಿಯ ಬಗ್ಗೆ ವಿವರಿಸಿದರು. ಕಾಲೇಜಿನ ಗ್ರಂಥಪಾಲಕಿಯಾದ ಪ್ರಭಾವತಿ ಸ್ವಾಗತಿಸಿ, ಕನ್ನಡವಿಭಾಗದ ಸಹಪ್ರಾಧ್ಯಾಪಕರಾದ ದಯಾನಂದ ಸುವರ್ಣ ವಂದಿಸಿದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಹರಿಶ್ಚಂದ್ರ ಕಾರ್ಯಕ್ರಮವನ್ನುನಿರೂಪಿಸಿದರು. ದ್ವಿತೀಯ ಫ್ಯಾಷನ್ ಡಿಸೈನರ್ ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥನೆ ಮಾಡಿದರು.



























