ಪುತ್ತೂರು : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಭಿರಾಮ್ ಫ್ರೆಂಡ್ಸ್ ಕ್ಲಬ್ (ರಿ) ಪುತ್ತೂರು ಇದರ ವತಿಯಿಂದ ಕೇಪುಳು ಅಂಗನವಾಡಿಗೆ ಸಿಹಿತಿಂಡಿ ಹಾಗೂ ಶಾಲಾ ಅಗತ್ಯತೆಗೆ ಅನುಸಾರವಾಗಿ ಕುಂಜೂರುಪಂಜ ಪ್ರಾಥಮಿಕ ಶಾಲೆಗೆ ಪುಸ್ತಕ ಜೋಡಣೆಯ ಕಪಾಟು ನೀಡಿ ಆಚರಿಸಲಾಯಿತು.

ಕುಂಜೂರುಪಂಜ ಶಾಲಾ ವತಿಯಿಂದ ಅಭಿರಾಮ್ ಫ್ರೆಂಡ್ಸ್ ಕ್ಲಬ್ ಗೆ ಕೃತಜ್ಞತೆಯ ಜೊತೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಗುರುವೃಂದ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಅಭಿರಾಮ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ತೇಜ ಕುಮಾರ್ ಕೆಮ್ಮಾಯಿ, ಶರತ್ ಕೇಪುಳು, ಪ್ರಜಿತ್ ಮಂಜಲ್ಪಡ್ಪು, ಕಿಶೋರ್ ತಾರೀಗುಡ್ಡೆ, ರಮೇಶ್ ಬಂಡಾಜೆ, ಭರತ್ ಉರ್ಲಾಂಡಿ, ಕಾರ್ತಿಕ್ ಊರಮಾಲ್, ಚಿದಾನಂದ ಕೇಪುಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


























