ಪ್ರಸ್ತುತ ಸನ್ನಿವೇಶದಲ್ಲಿ ಯುವಕರನ್ನು ಕೆಲವೊಂದು ವಿಚಾರಗಳು ಋಣಾತ್ಮಕವಾಗಿ ಪ್ರಚೋದನೆ ನೀಡುತ್ತಿವೆ. ಯುವ ಜನತೆಯನ್ನು ಧನಾತ್ಮಕ ಹಾದಿಯಲ್ಲಿ ಚಲಿಸುವಂತೆ ಮಾಡಿ, ದುಶ್ಚಟಗಳು- ಬೇಡದ ಕೆಲಸಗಳಿಗೆ ಹೋಗುವ ವಿಚಾರದಲ್ಲಿ ಕಡಿವಾಣ ಹಾಕಬೇಕಾದ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಕಲ್ಪನೆಗೆ ಸಾಥ್ ಕೊಡುವಂತೆ , ಯುವಕರ ದೃಷ್ಟಿಯಲ್ಲಿ ಭವ್ಯ ಭಾರತದ ಸೃಷ್ಟಿಯ ನೇಕಾರರಾಗಿ ತುಡಿದು-ದುಡಿಯುವ ವಿಶೇಷ ಕನಸುಗಳನ್ನು ಕಟ್ಟಿಕೊಂಡಿರುವ ಪರಿಕಲ್ಪನೆಯಿದು.ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯುವಕರಿಗೆ ನೀತಿ ರೀತಿಗಳಾಧಾರಿತ ಮೌಲ್ಯಗಳ ದಾರಿ ತೋರಿಸುವ ಕನಸಿನ ಯೋಜನೆಯಿದು.
ಈ ಕನಸಿಗೆ ಇದೀಗ ಪುತ್ತೂರಿನ ಅಕ್ಷಯ್ ರೈ ದಂಬೆಕಾನ ಪುಷ್ಠಿ ನೀಡುತ್ತಿದ್ದಾರೆ. ಅಕ್ಷಯ್ ಅವರೂ ಸ್ವಾಮಿ ವಿವೇಕಾನಂದರ ಮಾತಿನಂತೆ ಭವಿಷ್ಯ ಭಾರತಕ್ಕೆ ಉತ್ತಮ ಮನಸ್ಥಿತಿ, ಉತ್ತಮ ಶಕ್ತಿಯಾಗಿ ಹೊರಹೊಮ್ಮುವ ಯುವಕರನ್ನು ನಿರ್ಮಿಸುವ ಕನಸನ್ನು ಹೊಂದಿದ್ದು, ಈ ಕನಸಿಗೆ ಪೂರಕವೆಂಬ0ತೆ ಇದೀಗ ಸ್ಫೂರ್ತಿದಾಯಕ 25 ಕಿರುಚಿತ್ರಗಳನ್ನು ತಯಾರಿಸುವ ಯೋಜನೆಯನ್ನು ಹೊತ್ತುಕೊಂಡಿದ್ದಾರೆ. ಹೀಗಾಗಿ ಈ ಯೋಜನೆಗೆ ಆರಂಭದ ದಿನದ ಹೆಜ್ಜೆಯನ್ನಿಡಲಾಯಿತು.ಸರಳ ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ನೂಜಿ ತರವಾಡಿಗೆ ಭೇಟಿ ನೀಡಿದ ದಿನೇಶ್ ಮೆದು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.,ಪುತ್ತೂರು ರೋಟರಿ ಯುವ ಇದರ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು ಅಕ್ಷಯ್ ರೈ ದಂಬೆಕಾನ ಅವರಿಗೆ ಅಭನಂದನೆ ಸಲ್ಲಿಸಿದರು.
ಈ ವೇಳೆ ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪ್ರಮೋದ್, ಶ್ಯಾಮ್ ಸುದರ್ಶನ್, ಸೀಶೆ ಕಜೆಮಾರ್, ವೇಣುಗೋಪಾಲ್ ರೈ ನೂಜಿ, ಅಕ್ಷಯ್ ರೈ ಹೆತ್ತವರಾದ ಸದಾಶಿವ ರೈ ದಂಬೆಕಾನ, ಪ್ರಭಾ ಎಸ್ ರೈ, ಕಿರುಚಿತ್ರಗಳ ನಿರ್ದೇಶಕ ರತನ್ ರಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.