ವಿಟ್ಲ : 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ಕ್ಯಾಪ್ಟನ್ ಧನಂಜಯ ನಾಯ್ತೋಟ್ಟು ನೆರವೇರಿಸಿ, ದೇಶಾಭಿಮಾನದ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್. ಹೆಚ್., ಉಪಾಧ್ಯಕ್ಷರಾದ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಹರೀಶ್ ನಾಯಕ್.ಎಂ. ವಿಶ್ವನಾಥ್ ಎಂ., ಉದಯಕುಮಾರ್ ಎ., ಬಾಲಕೃಷ್ಣ ಪಿ.ಎಸ್., ದಯಾನಂದ ಆಳ್ವ, ಗೋವರ್ಧನ್ ಕುಮಾರ್ ಐ, ಸುಂದರ, ಡಿ., ದಿವಾಕರ ವಿ., ಜಯಂತಿ ಹೆಚ್.ರಾವ್ ಹಾಗೂ ಶುಭಲಕ್ಷ್ಮಿ ಹಾಗೂ ಅತಿಥಿಗಳಾಗಿ ತುಳಸಿದಾಸ್ ಶೆಣೈ ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿಗಳಾದ ಕೃಷ್ಣ ಮುರಳಿ ಶ್ಯಾಮ್. ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕ್ಯಾಪ್ಟನ್ ಧನಂಜಯ ನಾಯ್ತೋಟ್ಟು ಹಾಗೂ ತುಳಸಿದಾಸ್ ಶೆಣೈ ರನ್ನು ಬ್ಯಾಂಕಿನ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ರಾಣ್ಯ ಡಿ ಕಾರ್ಯಕ್ರಮ ನಿರೂಪಿಸಿದರು.

























