ಪುತ್ತೂರು: ಕೊರೋನಾ ಸವಾಲನ್ನು ಎದುರಿಸಿ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ಗುರುಗಳಿಂದ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಸುಮಾರು ರೂ. 35 ಸಾವಿರ ಮೌಲ್ಯದ ಪ್ರೋತ್ಸಾಹದ ಸಹಾಯ ಹಸ್ತ ನೀಡುವ ಮೂಲಕ ಆರೋಗ್ಯ ಕಾಳಜಿಯನ್ನು ತೋರಿಸಿ ಮಾದರಿ ಶಿಕ್ಷಕರಾಗಿದ್ದಾರೆ.
ಕೋಡಿಂಬಾಡಿ ಕ್ಲಸ್ಟರ್ ನ ೯ ಪ್ರಾಥಮಿಕ ೧ ಪ್ರೌಢಶಾಲೆಯ ೩೦ ಶಿಕ್ಷಕರು ಸೇರಿಕೊಂಡು ಆರೋಗ್ಯದ ಕಾಳಜಿ ಮಾಡುತ್ತಿರುವವರಿಗೆ ತಮ್ಮ ಕಿಂಚಿತ್ ಸೇವೆ ಮಾಡಬೇಕೆಂದು ಒಟ್ಟು ರೂ.೩೫ ಸಾವಿರ ಸಂಗ್ರಹಿಸಿ ನೆಕ್ಕಿಲಾಡಿ, ಕೋಡಿಂಬಾಡಿ, ಬನ್ನೂರು ಗ್ರಾಮ, ನಗರಸಭಾ ವ್ಯಾಪ್ತಿಯ ಕೆಮ್ಮಾಯಿ, ಸಾಲ್ಮರ, ಜಿಡೆಕಲ್ಲು ವಾರ್ಡ್ ನ ೧೫ ಮಂದಿ ಆಶಾ ಕಾರ್ಯಕರ್ತೆಯರಿಗೆ ನಗದು ಮತ್ತು ೨೦ ಅಂಗನವಾಡಿಯ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡುವಲ್ಲಿ ಮುಂದಾಗಿದ್ದು ಜೂ.೮ ರಂದು ಕೆಮ್ಮಾಯಿ ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪ್ರೋತ್ಶಾಹ ಧನ ಸಹಾಯವನ್ನು ಆಶಾ ಕಾರ್ಯಕರ್ತೆಯರಿಗೆ ಹಸ್ತಾಂತರಿಸಿದರು.
ಮುಂದಿನ ಎರಡು ಮೂರು ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಅಗತ್ಯ ಆಹಾರದ ಸಾಮಾಗ್ರಿ ನೀಡುವ ಕುರಿತು ಸಂಘಟಕರು ಮಾಹಿತಿ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಜಿನ್ನಪ್ಪ ಗೌಡ, ತಾ.ಪಂ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಲೀಲಾವತಿ, ಸುಂದರ ಪೂಜಾರಿ ಬಡಾವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವೇದಾವತಿ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಂ, ರಾಜ್ಯ ಸರಕಾರಿ ನೌಕರರ ಸಂಘದ ತನುಜಾ, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘಟಕಿ ಗಂಗಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ನಾಗೇಶ್ ಪಾಟಾಳಿ, ಸುಧಾ, ಉಪಸ್ಥಿತರಿದ್ದರು.
ಯಶೋದಾ ಪ್ರಾರ್ಥಿಸಿದರು. ಕೆಮ್ಮಾಯಿ ಶಾಲಾ ಮುಖ್ಯಗುರು ಮರಿಯಮ್ಮ ಅವರು ಸ್ವಾಗತಿಸಿದರು. ಜಿಡೆಕಲ್ಲು ಶಾಲಾ ಮುಖ್ಯಗುರು ತಾರನಾಥ ಸವಣೂರು ವಂದಿಸಿದರು.ಸಿಆರ್ ಪಿ ಅಶ್ರಪ್ ಕಾರ್ಯಕ್ರಮ ನಿರೂಪಿಸಿದರು.