ಪುತ್ತೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಆದೇಶಿಸಲಾಗಿದೆ.
ಪುತ್ತೂರು ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾಗಿ ಬಿಳಿಯೂರು, ಸಂಪಿಕೋಡಿ ನಿವಾಸಿ ಉಮಾನಾಥ್ ಶೆಟ್ಟಿ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಸದಸ್ಯರಾಗಿ ಸರ್ವೆ ನಿವಾಸಿ ಶಿವನಾಥ್ ರೈ, ಚಿಲ್ಮೆತ್ತಾರು ನಿವಾಸಿ ಸಂತೋಷ್ ಭಂಡಾರಿ, ಹಿರೇಬಂಡಾಡಿ ನೆಕ್ಕಿಲು ನಿವಾಸಿ ಶೇಷಪ್ಪ, ನಿಡ್ಪಳ್ಳಿ ಬೃಂದಾವನ ಕೋಡಿ ನಿವಾಸಿ ತಾರಾನಾಥ ನುಳಿಯಾಲು, ಬಿಳಿಯೂರು ಪೆರ್ನೆ ನಿವಾಸಿ ಮಹಮ್ಮದ್ ಫಾರೂಕ್, ಅಳಿಕೆ ಜೆಡ್ಪು ನಿವಾಸಿ ಬಬಿತಾ, ಬೆಳ್ಳಿಪ್ಪಾಡಿ ಕಜೆ ನಿವಾಸಿ ವಿಜಯಲಕ್ಷ್ಮೀ, ಕಾವು ಅಮ್ಚಿನಡ್ಕ ನಿವಾಸಿ ಎಡ್ವರ್ಡ್ ಮೈಕಲ್ ಡಿಸೋಜಾ, ಬೊಳ್ಳಾಡಿ ನಿವಾಸಿ ಅಶೋಕ್ ಪೂಜಾರಿ ಸಹಿತ ಹಲವರನ್ನು ನೇಮಕ ಮಾಡಲಾಗಿದೆ.