ಪುತ್ತೂರು : ಕೋವಿಡ್ 19 ನ ಸಂಕಷ್ಟದ ಸಮಯದಲ್ಲಿ ಜನರು ಅಧಿಕವಾಗಿ ಮನೆಯಲ್ಲೇ ಇದ್ದು ಯಾವುದೇ ಕೆಲಸವಿಲ್ಲದೆ ಇರುವುದರಿಂದ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸಹಜ್ ರೈ ಬಳಜ್ಜ ಹಾಗೂ ಅವರ ತಂದೆ ಉದ್ಯಮಿ ಜಯರಾಮ ರೈ ರವರು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನೂರು ಭಾಗದ 120 ಮನೆಗಳಿಗೆ ಕಿಟ್ ಗಳನ್ನು ವಿತರಣೆ ಮಾಡಿದರು.
ನೆಟ್ಟಣಿಗೆ ಮುಡ್ನೂರು ಬಿಜೆಪಿ ಶಕ್ತಿಕೇಂದ್ರ ದ ಸಂಚಾಲಕ ಅಮರನಾಥ, ಬೂತ್ ಸಮಿತಿ ಅಧ್ಯಕ್ಷರಾದ ಉಮೇಶ್ ರೈ,ಮಾಜಿ ಗ್ರಾ. ಪಂಚಾಯತ್ ಸದಸ್ಯ ಖಾದರ್ ಕರ್ನೂರು, ಗ್ರಾ. ಪಂಚಾಯತ್ ಸದಸ್ಯ ಪ್ರದೀಪ್ ರೈ ಕೆ.ಬಿ, ಕುಮಾರನಾಥ ಪೂಜಾರಿ,ಹಿರಿಯರಾದ ಸುಭಾಷ್ಚಂದ್ರ ರೈ ಮೈರೋಳು, ಮತ್ತು ಇನ್ನಿತರರು ಉಪಸ್ಥಿತರಿದ್ದರು.ಪಂಚಾಯತ್ ಸದಸ್ಯೆ ಪ್ರಫುಲ್ಲ ರೈ ಕರ್ನೂರು ಸ್ವಾಗತಿಸಿದರು.