ಕಡಬ : ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಬಾರು ಗ್ರಾಮದ ಬೊಟ್ಟಡ್ಕ ಬಳಿಯ ಕೊಂಬಾರು ರಕ್ಷಿತಾರಣ್ಯದ ಪ್ರದೇಶದ ಉಡೆಂಜಿಪಲ್ಲ ತೋಡು ಪ್ರದೇಶದಲ್ಲಿ ಸಂಪೂರ್ಣ ಕೊಳೆತು ಹೋದ ಮೃತದೇಹದ ಅಸ್ತಿಪಂಜರವೊಂದು ಪತ್ತೆಯಾಗಿದ್ದು, ಅದರ ಗುರುತು ಪತ್ತೆಗೆ ಸಹಕರಿಸುವಂತೆ ಕಡಬ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಸ್ಥಳೀಯರ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿದ ವೇಳೆ ತಲೆ ಬುರುಡೆ, ಎದೆ ಮೂಳೆಗಳು, ಕಾಲಿನ ಮೂಳೆಗಳು ಮಾತ್ರ ಕಂಡುಬಂದಿದ್ದು, ಮಾಂಸಖಂಡಗಳು ಮತ್ತು ಚರ್ಮ ಇಲ್ಲದೇ ಇದ್ದು, ಮೃತದೇಹವು ಪುರುಷನಧ್ದೋ ಅಥವಾ ಮಹಿಳೆಯಧ್ದೋ ಎನ್ನುವುದು ತಿಳಿದುಬಂದಿಲ್ಲ.
ಸುಮಾರು 4ರಿಂದ 6 ತಿಂಗಳ ಹಿಂದೆ ಕಾಡಿನಲ್ಲಿ ಮೃತಪಟ್ಟಿರುವ ಸಾಧ್ಯತೆಗಳಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

























