ಪುತ್ತೂರು : ಮೈಸೂರಿನಲ್ಲಿ ನಡೆದ ಸೀನಿಯರ್ ವೆಯಿಟ್ಲಿಫ್ಟಿಂಗ್ ನಲ್ಲಿ 81ಕೆಜಿ ವಿಭಾಗದಲ್ಲಿ ರಜತ್ ರೈ ಚಿನ್ನದ ಪದಕ ಪಡೆದಿದ್ದಾರೆ ಮತ್ತು ಒಟ್ಟು 298ಕೆಜಿ ಭಾರ ಎತ್ತುವ ಮೂಲಕ ಹೊಸ ರಾಜ್ಯ ಕೂಟ ದಾಖಲೆಯನ್ನು ಮಾಡಿದ್ದಾರೆ.
ಕಳೆದ 2ವರ್ಷಗಳಿಂದ ಚಿನ್ನದ ಪದಕ ಪಡೆದಿದ್ದು,3ನೇ ವರ್ಷ ಕೂಡ ಚಿನ್ನದ ಪದಕ ಪಡೆದು ಹ್ಯಾಟ್ಟ್ರಿಕ್ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಅಕ್ಟೋಬರ್ ನಲ್ಲಿ ಹಿಮಾಚಲ್ ಪ್ರದೇಶದಲ್ಲಿ ನಡೆಯುವ ಸೀನಿಯರ್ ನ್ಯಾಷನಲ್ ವೆಯಿಟ್ಲಿಫ್ಟಿಂಗ್ ಚಾಂಪಿನ್ಶಿಪ್ ಗೆ ಮೂರನೇ ಭಾರಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇರ್ದೆ ಬೆಟ್ಟಪಾoಡಿ ನಿವಾಸಿಯಾದ ರಜತ್ ರೈ ರತ್ನಾಕರ ರೈ ಮತ್ತು ಶಶಿಕಲಾ ದಂಪತಿಗಳ ಪುತ್ರ. ಎಸ್.ಡಿ.ಎಂ ಸ್ಪೋರ್ಟ್ ಕ್ಲಬ್ ನಲ್ಲಿ ತರೆಬೇತಿ ಪಡೆಯುತ್ತಿದ್ದು, ಸಂತೋಷ್ ಕುಮಾರ್ ಮತ್ತು ರಮೇಶ್ ತರಬೇತಿ ನೀಡುತ್ತಿದ್ದಾರೆ.