ಸುಳ್ಯ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತೋಡಿಕಾನ ಅಡ್ಯಡ್ಕ ಸಮೀಪ ನಡೆದಿದೆ.
ಸಾಕಿಮ್, ಜಮೀನ್ ಪಾಷಾ, ಸರ್ಪೂದ್ದೀನ್ ಬಂಧಿತರು.
ಆ.19 ರಂದು ರಾತ್ರಿ ವೇಳೆ ತೋಡಿಕಾನ ಅಡ್ಯಡ್ಕ ಕಾಲೋನಿ ಕಡೆಯಿಂದ ಅರಂತೋಡು ಕಡೆಗೆ ಮೂರು ಜನ ಅಶೋಕ್ ಲೈಲ್ಯಾಂಡ್ ದೋಸ್ತ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸರಸ್ವತಿ ಬಿ ಟಿ ರವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ, ವಾಹನದಲ್ಲಿ 2 ಜಾನುವಾರುಗಳು ಕಂಡುಬಂದಿದ್ದು, ವಾಹನದಲ್ಲಿದ್ದ ಮೂವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪರವಾನಿಗೆ ಹೊಂದದೇ ಜಾನುವಾರು ಸಾಗಿಸುತ್ತಿರುವುದು ತಿಳಿದುಬಂದಿದ್ದು, ಮುಂದಿನ ಕಾನೂನುಕ್ರಮಕ್ಕಾಗಿ ಮೂವರನ್ನು, ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ ವಾಹನದೊಂದಿಗೆ ವಶಕ್ಕೆ ಪಡೆಯಲಾಗಿದೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 100/2024 ಕಲಂ: 5.7.12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಆದ್ಯಾದೇಶ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿದೆ.


























