ಬೆಳ್ಳಾರೆ : ಆಟೋ ರಿಕ್ಷಾವನ್ನು ಅಜಾಗರೂಕತೆಯಿಂದ ಚಲಾಯಿಸಿರುವ ಬಗ್ಗೆ ಪ್ರಶ್ನಿಸಿದ ವ್ಯಕ್ತಿಯೋರ್ವರಿಗೆ ಆಟೋ ಚಾಲಕ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ತಿಗೆ ನಿವಾಸಿ ಮೋಹನ್ ಎಂಬವರು ನೀಡಿರುವ ದೂರಿನ ಮೇರೆಗೆ ಮನೋಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೋಹನ್ ರವರು ಕೆಲವು ದಿನಗಳ ಹಿಂದೆ ಕೊಳ್ತಿಗೆಯ ಪಟ್ಲ ಎಂಬಲ್ಲಿ ಬೈಕನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಮನೋಜ್ ಎಂಬಾತ ಆಟೋ ರಿಕ್ಷಾವನ್ನು ಅಜಾಗರೂಕತೆಯಿಂದ ಮೋಹನ್ ರವರ ಬೈಕಿಗೆ ಡಿಕ್ಕಿ ಹೊಡೆಯುವ ರೀತಿ ಚಲಾಯಿಸಿದ್ದು, ಆ.18 ರಂದು ರಾತ್ರಿ ಮೋಹನ್ ರವರು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಅಂಬೇಡ್ಕರ್ ಭವನದ ಬಳಿ ಇದ್ದಾಗ, ಅಲ್ಲಿದ್ದ ಮನೋಜ್ ನೊಂದಿಗೆ ಆಟೋರಿಕ್ಷಾವನ್ನು ಅಜಾಗರೂಕತೆಯಿಂದ ಚಲಾಯಿಸಿದ ಬಗ್ಗೆ ಪ್ರಶ್ನಿಸಿದ್ದು, ಈ ವೇಳೆ ಮನೋಜ್ ಮೋಹನ್ ರವರಿಗೆ ಅವಾಚ್ಯವಾಗಿ ಬೈದಿದ್ದು, ಮಂಜುನಾಥ ಹಾಗೂ ಮಮತಾ ಎಂಬವರೊಂದಿಗೆ ಸೇರಿ ಹಲ್ಲೆ ನಡೆಸಿದ್ದು, ಅಲ್ಲಿಯೇ ಇದ್ದ ಸ್ಥಳೀಯರು ಗಲಾಟೆಯನ್ನು ತಡೆದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 70/2024 ಕಲಂ: ಬಿಎನ್ಎಸ್ . 352, 118(1), 115(2), 3(5) ರಂತೆ ಪ್ರಕರಣ ದಾಖಲಾಗಿದೆ.