ಕೆಲವು ಪ್ರೇಮಿಗಳು ತೋರುವ ಹುಚ್ಚಾಟಗಳು ಅಷ್ಟಿಷ್ಟಲ್ಲ. ತಾವು ಎಲ್ಲಿ ಇದ್ದೇವೆ ಎಂಬುದನ್ನೂ ಕೂಡಾ ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್ ಮಾಡುತ್ತಾ ಇತರರಿಗೆ ಮುಜುಗರ ಉಂಟು ಮಾಡುತ್ತಿರುತ್ತಾರೆ. ಮೆಟ್ರೋ, ರೈಲು, ಬಸ್ ಇತ್ಯಾದಿ ಸಾರ್ವಜನಿಕರು ಪ್ರಯಾಣಿಸುವಂತಹ ಸ್ಥಳಗಳಲ್ಲಿ ಪ್ರೇಮಿಗಳು ರಾಜಾರೋಷವಾಗಿ ರೊಮ್ಯಾನ್ಸ್ ಮಾಡಿದಂತಹ ಅಸಹ್ಯಕರ ಘಟನೆಗಳ ಸುದ್ದಿಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಪಾರ್ಕ್ ಗೆ ಬಂದ ಪ್ರೇಮಿಗಳಿಬ್ಬರು ಪೊದೆಯಲ್ಲಿ ಕುಳಿತು ರೊಮ್ಯಾನ್ಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಾರ್ಕ್, ಬಸ್ಸ್ಟಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡಿ ಪ್ರೇಮಿಗಳು ಸಿಕ್ಕಿಬಿದ್ದು ಸಾರ್ವಜನಿಕರ ಕೈಯಿಂದ ಬೈಗುಳ ತಿಂದ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಇಲ್ಲೊಂದು ಪ್ರೇಮಿಗಳು ಕೂಡಾ ಪಾರ್ಕ್ ನಲ್ಲಿ ಪೊದೆಯಲ್ಲಿ ರೋಮ್ಯಾನ್ಸ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ವೈರಲ್ ವೀಡಿಯೋದಲ್ಲಿ ಪಾರ್ಕ್ ಒಂದರಲ್ಲಿ ಪ್ರೇಮಿಗಳಿಬ್ಬರು ಪೊದೆಯಲ್ಲಿ ಅಡಗಿ ಕುಳಿತು ರೊಮ್ಯಾನ್ಸ್ ಮಾಡುವಾಗ ದೃಶ್ಯವನ್ನು ಕಾಣಬಹುದು. ಇವರು ಸರಸ ಸಲ್ಲಾಪದಲ್ಲಿ ತೊಡಗಿರುವುದನ್ನು ಯಾರೋ ವೀಡಿಯೋ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪ್ರೇಮಿಗಳು ಯಾಕೆ ವೀಡಿಯೋ ಮಾಡಿದ್ದು ಎಂದು ಆ ವ್ಯಕ್ತಿಯನ್ನು ದಬಾಯಿಸಿದ್ದಾರೆ.