ಪುತ್ತೂರು : ಕೊಂಬೆಟ್ಟು ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪದ ಬಗ್ಗೆ ಕ್ಷಣಕ್ಕೊಂದು ಹೇಳಿಕೆ ಬಗ್ಗೆ ಅನುಮಾನ ಸೃಷ್ಟಿಯಾಗಿದ್ದು, ಶೀಘ್ರ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.
ಮೊದಲು ಚೂರಿಯಿಂದ ಇರಿತ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ವೀಡಿಯೋ ಬಿಡುಗಡೆಗೊಳಿಸಲಾಯಿತು.
ಇದೀಗ ಚೂರಿ ಎಂಬ ಆರೋಪದ ಬದಲು ಬ್ಲೇಡ್, ಗ್ಲಾಸ್ ನಿಂದ ಇರಿದಿದ್ದಾರೆ ಎಂಬ ಆರೋಪ ಬದಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ನಡೆದ ಘಟನೆಯ ಸತ್ಯಾಸತ್ಯತೆಯನ್ನು ಶೀಘ್ರ ಪೊಲೀಸರು ತನಿಖೆ ನಡೆಸಿ ಹೊರತರಬೇಕು.
ರಾಜಕೀಯ ಒತ್ತಡಕ್ಕೆ ಪೊಲೀಸ್ ಇಲಾಖೆ ಬಗ್ಗದೆ ಘಟನೆಯ ನೈಜತೆಯನ್ನು ಶೀಘ್ರ ಹೊರತರಬೇಕು ಎಂದು ಅವರು ತಿಳಿಸಿದ್ದಾರೆ.