ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಇಲಾಖೆಯು ಹಿರಿಯ ಸೆಕ್ಷನ್ ಇಂಜಿನಿಯರ್, ಟೆಕ್ನಿಷೀಯನ್, ಸಹಾಯಕ ಲೋಕೋ ಪೈಲಟ್, ಸ್ಟೇಷನ್ ಮಾಸ್ಟರ್ ಸೇರಿದಂತೆ ಇತರೆ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳೂ ಕೊನೆ ದಿನಾಂಕದೊಳಗೆ ಅಪ್ಲೇ ಮಾಡಲು ತಿಳಿಸಲಾಗಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ಕೊನೆ ದಿನಾಂಕ, ಅರ್ಜಿ ಶುಲ್ಕ, ವಯಸ್ಸು, ಯಾವ ರೀತಿ ಅಪ್ಲೇ ಮಾಡುವುದು, ಎಷ್ಟು ಹುದ್ದೆಗಳು, ಯಾವ ರೀತಿ ಪರೀಕ್ಷೆಗಳು ಇರುತ್ತಾವೆ, ವೇತನ ಶ್ರೇಣಿ, ಹುದ್ದೆಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಸಂಪೂರ್ಣವಾಗಿ ಪರಿಶೀಲನೆ ಮಾಡಿ.
ಯಾವ ಹುದ್ದೆ, ಯಾವ ಕೋರ್ಸ್ ಆಗಿರಬೇಕು..?
- ಹಿರಿಯ ಸೆಕ್ಷನ್ ಇಂಜಿನಿಯರ್ ಹುದ್ದೆಗಳು 10 ಇದ್ದು ಇದಕ್ಕೆ BE/B.Tec in EE/ಮೆಕ್ಯಾನಿಕಲ್ ಇಂಜಿನಿಯರ್ ಆಗಿರಬೇಕು.
- ಟೆಕ್ನಿಷೀಯನ್ 35 ಹುದ್ದೆಗಳಿದ್ದು 10ನೇ ತರಗತಿ ಅಥವಾ ಐಟಿಐ ಆಗಿರಬೇಕು.
- ಸಹಾಯಕ ಲೋಕೋ ಪೈಲಟ್ 15 ಜಾಬ್ಗಳಿದ್ದು 10ನೇ ತರಗತಿ ಅಥವಾ ಐಟಿಐ ಆಗಿರಬೇಕು.
- ಟ್ರ್ಯಾಕ್ ನಿರ್ವಾಹಕ ಕೆಲಸಗಳು 35 ಇದ್ದು 10ನೇ ತರಗತಿ ಮಾತ್ರ ಪೂರ್ಣಗೊಳಿಸಿರಬೇಕು.
- ಸ್ಟೇಷನ್ ಮಾಸ್ಟರ್ ಹುದ್ದೆಗಳು 10 ಇದ್ದು ಪದವಿ ಆಗಿರಬೇಕು
- ಗೂಡ್ಸ್ ಟ್ರೈನ್ ಮ್ಯಾನೇಜರ್ 05 ಹುದ್ದೆಗಳಿದ್ದು ಪದವಿ ಆಗಿರಬೇಕು
- ಪಾಯಿಂಟ್ ಮ್ಯಾನ್ 60 ಕೆಲಸಗಳಿದ್ದು 10ನೇ ತರಗತಿ ಪಾಸ್ ಆಗಿರಬೇಕು
- ESTM 15 ಕೆಲಸಗಳು ಇದ್ದು 10 ತರಗತಿ, ಐಟಿಐ, ಸೆಕೆಂಡ್ ಪಿಯುಸಿ ಆಗಿರಬೇಕು
- ಕಮರ್ಷಿಯಲ್ ಸೂಪರ್ವೈಸರ್ 05 ಹುದ್ದೆಗಳಿದ್ದು ಯಾವುದೇ ಪದವಿಯನ್ನು ಪಡೆದಿರಬೇಕು.
ಒಟ್ಟು 190 ಹುದ್ದೆಗಳಿದ್ದು ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 36 ವರ್ಷದೊಳಗಿನವರು ಆಗಿರಬೇಕು. ಪರೀಕ್ಷೆಯು ಕಂಪ್ಯೂಟರ್ ಬೇಸ್ ಟೆಸ್ಟ್ ಇರುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಸಂದರ್ಶನ ಮಾಡಿ ಬಳಿಕ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅರ್ಜಿಗೆ ಯಾರು ಅಪ್ಲೇ ಮಾಡ್ತೋರೋ ಅವರು 885 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಇದು ಆನ್ಲೈನ್ ಮೂಲಕವೇ ಇಲಾಖೆಗೆ ಪೇ ಮಾಡಬೇಕು. ಇನ್ನು ಈ ಹುದ್ದೆಗಳಿಗೆ ತಿಂಗಳಿಗೆ ಸಂಬಳ 18,000 ರೂ.ಗಳಿಂದ 44,900 ರೂ.ಗಳ ವರೆಗೆ ಇರುತ್ತದೆ.
ಅಭ್ಯರ್ಥಿಗಳು ಅರ್ಜಿಗಳನ್ನು ಅಪ್ಲೇ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ- https://konkanrailway.com/pages/viewpage/current_notifications
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16 ಸೆಪ್ಟೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಅಕ್ಟೋಬರ್ 2024



























