ಪುತ್ತೂರು : ನವರಾತ್ರಿಯ ಅಂಗವಾಗಿ ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು ಇದರ ಪ್ರಥಮ ವರ್ಷದ ಪಿಲಿನಲಿಕೆಯ ಆಮಂತ್ರಣ ಪತ್ರಿಕೆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಹಿಂದೂ ಸಂಘಟನೆ ಪ್ರಮುಖರಾದ ಅಕ್ಷಯ್ ರಜಪೂತ್ ಹಾಗೂ ಮುರಳಿ ಬ್ರದರ್ಸ್ ಟೈಗರ್ ಟ್ರೂಪ್ ಮುಖ್ಯಸ್ಥ ಕಿರಣ್ ಮುರಳಿ ಹಾಗೂ ಶಿವಂ ಟೈಗರ್ಸ್ ಕೆಮ್ಮಿಂಜೆ ಪುತ್ತೂರು ಇದರ ಮುಖ್ಯಸ್ಥರು ಮತ್ತು ಸದಸ್ಯರು ಉಪಸ್ಥಿತರಿದ್ದರು.

























