ಉಡುಪಿ : ಕಾರ್ಕಳದಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಭಯ್ ಬಿಜೆಪಿ ಹಾಗೂ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ.
ಕಾರ್ಕಳ ಭುವನೇಂದ್ರ ಕಾಲೇಜು ರಸ್ತೆಯ ನಿವಾಸಿ ಅಭಯ್ ಮಾಲ್ ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಗೆ ಮಾದಕ ವಸ್ತು ಪೂರೈಸಿದ್ದ ಎಂದು ತಿಳಿದು ಬಂದಿದೆ.
ಅಭಯ್ ಹಿನ್ನಲೆ ಜಾಡಿಸಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಗಳು ಸಿಕ್ಕಿದ್ದು, ಅಭಯ್ ಡ್ರಗ್ ಪೆಡ್ಲಿಂಗ್ ಅನ್ನು ಮೂಲ ದಂಧೆಯಾಗಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ಅಭಯ್ ಬ್ಯಾಂಕ್ ಖಾತೆಯಲ್ಲಿ ಲಕ್ಷಗಟ್ಟಲೆ ವ್ಯವಹಾರ ಪತ್ತೆಯಾಗಿದೆ.
ಅಜಯ್ ಫೇಸ್ಬುಕ್ ವಾಲ್ ನಲ್ಲಿ ಶಾಸಕ ಸುನೀಲ್ ಕುಮಾರ್ ರನ್ನು ಬೆಂಬಲಿಸಿ ಪೋಸ್ಟ್ ಗಳನ್ನು ಹಾಕಿದ್ದು, ಚುನಾವಣೆ ವೇಳೆ ಸುನೀಲ್ ಕುಮಾರ್ ಗೆಲುವಿಗಾಗಿ ಶ್ರಮಿಸಿದ್ದ ಎನ್ನಲಾಗುತ್ತಿದೆ.
ಅತ್ಯಾಚಾರ ಪ್ರಕರಣದ ವಿರುದ್ಧ ನಿನ್ನೆ ಬಿಜೆಪಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದು, ಇದೀಗ ಬಿಜೆಪಿ ಕಾರ್ಯಕರ್ತ ಬಂಧನವಾಗಿರುವುದು ಕಾರ್ಕಳ ಬಿಜೆಪಿಗೆ ಶಾಕ್ ನೀಡಿದೆ.

























