ವಿಟ್ಲ : ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೇಪು ಎಂಬಲ್ಲಿ ನಡೆದಿದೆ.

ಕೇಪು ಗ್ರಾಮದ ಗುತ್ತುದಡ್ಕ ನಿವಾಸಿ ಕೊರಗಪ್ಪ ನಾಯ್ಕ್ ರವರ ಪುತ್ರ ನವೀನ್ ನಾಯ್ಕ್ (35) ಮೃತ ವ್ಯಕ್ತಿ.
ನವೀನ್ ನಾಯ್ಕ್ ರವರು ತೆಂಗಿನಕಾಯಿ ತರಲು ತೋಟಕ್ಕೆ ತೆರಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


























