ಬಂಟ್ವಾಳ : ಶಂಭುಗ ಫ್ರೆಂಡ್ಸ್ ಇದರ ನೇತೃತ್ವದಲ್ಲಿ ಶಂಭುಗ ಬೃಂದಾವನ ಬಾಲಗೋಕುಲದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಆಟೋಟ ಸ್ಪರ್ಧೆ ನಡೆಯಿತು.

ಸಚಿನ್ ರೈ ಮಾಣಿಗುತ್ತು, ಸೀತಾರಾಮ್ ಶೆಟ್ಟಿ ಶಂಭುಗ, ರಾಧಾಕೃಷ್ಣ ಅಡ್ಯಂತಾಯ, ಗಣೇಶ್ ರೈ ಸಾಗು, ಗೋಪಾಲ್ ಮೂಲ್ಯ ನೆಲ್ಲಿ, ಲೋಕೆಶ್ ಪಲ್ಲತ್ತಿಲ, ಹರಿಯಪ್ಪ ಮೂಲ್ಯ ಬರೆ, ಪ್ರವೀಣ್ ಬಂಗುಲೆ, ಕೊರಗಪ್ಪ ಶೆಟ್ಟಿ ಶಂಭುಗ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಲಿಶ್ವಿತ ಶಂಭುಗ ಸ್ವಾಗತಿಸಿದರು ಹಾಗೂ ನರಸಿಂಹ ಶೆಟ್ಟಿ ಮಾಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಬೃಂದಾವನ ಬಾಲಗೋಕುಲದ ವಿದ್ಯಾರ್ಥಿಗಳಿಂದ ಕುಣಿತ ಭಜನೆ ನಡೆಯಿತು. ಹಾಗೂ ಸಣ್ಣ ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ಛದ್ಮವೇಷ ಸ್ಪರ್ಧೆ ನಡೆಯಿತು. ಹರ್ಷರಾಜ್ ನೆಲ್ಲಿ ಧನ್ಯವಾದ ಸಲ್ಲಿಸಿದರು.






























