ಮಂಗಳೂರು : ಎಂ.ಎಲ್.ಸಿ ಐವನ್ ಡಿಸೋಜಾ ಅವರ ನಿವಾಸದ ಮೇಲೆ ಕಲ್ಲು ತೂರಾಟದ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಬೋಳಂತೂರು ಕೋಡಿಮನೆ ನಿವಾಸಿ, ಭರತ್ (ಯಕ್ಷಿತ್) (24), ಕೊಳ್ನಾಡು ಪರ್ತಿಪಾಡಿ ನಿವಾಸಿ ದಿನೇಶ್ (20) ಬಂಧಿತರು.
ವಿಚಾರಣೆ ವೇಳೆ ಆರೋಪಿಗಳು ಐವನ್ ಡಿಸೋಜಾ ನೀಡಿದ ಹೇಳಿಕೆ ಮೇಲಿನ ಕೋಪವೇ ಕೃತ್ಯದ ಹಿಂದಿನ ಉದ್ದೇಶ ಎಂದು ಆರೋಪಿಸಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ದಾಖಲೆಗಳ ಮೂಲಕ ಅವರ ಚಲನವಲನಗಳ ಪರಿಶೀಲನೆ ಸೇರಿದಂತೆ ಹೆಚ್ಚಿನ ತನಿಖೆಗಳು, ಘಟನೆಯಲ್ಲಿ ಅವರು ಭಾಗಿಯಾಗಿರುವುದನ್ನು ಸ್ವತಂತ್ರವಾಗಿ ದೃಢಪಡಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.



























