ಉಪ್ಪಿನಂಗಡಿ : ವ್ಯಕ್ತಿಯೋರ್ವ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ, ಕಣಿಯೂರು ನಿವಾಸಿ ಸಿದ್ಧಿಕ್ ನೀಡಿರುವ ದೂರಿನ ಮೇರೆಗೆ ಶರತ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಆ.27 ರಂದು ರಾತ್ರಿ ಸಿದ್ಧಿಕ್ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಮನೆಗೆ ಚಲಾಯಿಸಿಕೊಂಡು ಹೋಗುತ್ತಾ, ಬೆಳ್ತಂಗಡಿ ತಾಲೂಕು, ಕಣಿಯೂರು ಗ್ರಾಮದ, ಪದ್ಮುಂಜ ಎಂಬಲ್ಲಿ ತಲುಪಿದಾಗ, ಶರತ್ ನಿಂತುಕೊಂಡು ಪೋನ್ ನಲ್ಲಿ ಮಾತನಾಡುತ್ತಿದ್ದು, ಆ ವೇಳೆ ಎದುರಿನಿಂದ ಬೇರೆ ವಾಹನ ಬಂದುದರಿಂದ ಸಿದ್ಧಿಕ್ ವಾಹನವನ್ನು ಶರತ್ ಸಮೀಪದಿಂದ ಚಲಾಯಿಸಿದ್ದು, ಈ ವೇಳೆ ಶರತ್ ಅವ್ಯಾಚವಾಗಿ ಬೈದಿದ್ದು, ಬಳಿಕ ಸಿದ್ಧಿಕ್ ವಾಹನ ಚಲಾಯಿಸುತ್ತಾ ಮುಂದೆ ಹೋದಾಗ, ಅವರ ಹಿಂದಿನಿಂದ ಮೋಟಾರು ಬೈಕಿನಲ್ಲಿ ಹಿಂಬಾಲಿಸಿ ಬಂದ ಶರತ್ ಸಿದ್ಧಿಕ್ ರನ್ನು ತಡೆದು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ : 100/2024 ಕಲಂ: 126(2), 115(2) , 352,351(2) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

























