ಪುತ್ತೂರು : ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ನೂತನ ಸಮಿತಿಯ ಅಧಿಕಾರ ಹಸ್ತಾಂತರ ನಡೆಯಿತು.

ಸರಳ ಕಾರ್ಯಕ್ರಮದಲ್ಲಿ ಎರಡೂ ಮಂಡಲದ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ ಮತ್ತು ಪಿ.ಜಿ ಜಗನ್ನೀವಾಸ ರಾವ್ ರವರು ನೂತನ ಅಧ್ಯಕ್ಷರುಗಳಾದ ದಯಾನಂದ ಶೆಟ್ಟಿ ಉಜ್ರೆಮಾರ್ ಮತ್ತು ಶಿವಕುಮಾರ್ ಕಲ್ಲಿಮಾರ್ ರವರಿಗೆ ಬಿಜೆಪಿ ಶಲ್ಯ ಹಾಕಿ ಕಛೇರಿಯ ದಾಖಲಾತಿ ಪುಸ್ತಕ ಹಸ್ತಾಂತರಿಸಿ ನೂತನ ಸಮಿತಿಗೆ ಶುಭಹಾರೈಸಿದರು.

ಗ್ರಾಮಾಂತರ ಮಂಡಲದ ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ, ನಾಗೇಶ್ ಪ್ರಭು ಜೊತೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಕಾರ್ಯದರ್ಶಿ ವಿದ್ಯಾ ಗೌರಿ, ನೂತನ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ಸುನೀಲ್ ದಡ್ಢು, ಯತೀಂದ್ರ ಕೊಚ್ಚಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, ರಾಧಕೃಷ್ಣ ಬೂಡಿಯಾರ್, ಅರುಣ್ ಪುತ್ತಿಲ, ಒ.ಬಿ.ಸಿ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್, ಚನಿಲ ತಿಮ್ಮಪ್ಪ ಶೆಟ್ಟಿ,ಜೀವಂಧರ್ ಜೈನ್,ಅಪ್ಪಯ ಮಣಿಯಾಣಿ, ಸಂತೋಷ್ ರೈ ಕೈಕಾರ, ರಾಜೇಶ್ ಬನ್ನೂರು, ಹರೀಶ್ ಮರುವಾಳ , ಪ್ರಜ್ವಲ್ ಘಾಟೆ, ರವಿಕುಮಾರ್ ರೈ ಮಠ, ಸುಜಿತ್ ಬೆಟ್ಟಂಪಾಡಿ, ಮಣಿಕಂಠ, ವಿಶ್ವನಾಥ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.