ಬೆಂಗಳೂರು : ಸುಳ್ಯ ಕೊಲ್ಲಮೊಗ್ರದ ಯುವತಿ ಬೆಂಗಳೂರಿನಲ್ಲಿ ಕಾಣೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಯುವತಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಏರ್ಪೋರ್ಟ್ ನಿಂದ ಯುವತಿ ನಾಪತ್ತೆಯಾದ ಬಗ್ಗೆ ಮನೆಯವರು ಪೋಲೀಸರಿಗೆ ದೂರು ನೀಡಿದ್ದರು. ಪ್ರಕರಣ ಭೇದಿಸಿದ ಪೊಲೀಸರಿಗೆ ಮಾಡಾವು ಮೂಲದ ಯುವಕನೋರ್ವನ ಕೈವಾಡ ಬೆಳಕಿಗೆ ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಯುವತಿ ನಾಪತ್ತೆ ವಿಚಾರ ಗಮನಕ್ಕೆ ಬರುತ್ತಿದ್ದಂತೆ ನಾಪತ್ತೆಯಾದ ಯುವತಿ ತನ್ನ ಅಕ್ಕನ ಮನೆಯಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಠಾಣೆಗೆ ಮಾಹಿತಿ ನೀಡಿದ್ದು, ಅಲ್ಲಿ ಯುವತಿಯನ್ನು ಪತ್ತೆಹಚ್ಚಲಾಗಿದೆ ಮತ್ತು ನಮ್ಮಲ್ಲಿಗೆ ದೂರುಗಳು ಬಂದಾಗ ನಾವು ಸ್ವೀಕರಿಸದೇ ಕಳಿಸಿಲ್ಲ ಮತ್ತು ಯುವತಿ ನಾಪತ್ತೆಯ ವಿಚಾರಕ್ಕೆ ಬೇಕಾದ ಕಾನೂನು ರೀತಿಯ ಸೂಚನೆಗಳನ್ನು ಮತ್ತು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ತಿಳಿಸಿದ್ದಾರೆ.



























