ಪುತ್ತೂರು : ಬಂಟಾಜೆ ರಕ್ಷಿತಾರಣ್ಯದಲ್ಲಿ ಮರಗಳಿಂದ ತೊಗಟೆಯನ್ನು ಕೆತ್ತಿ ಸಾಗಾಟ ಮಾಡಿದ ಕೇರಳದ ಮೂವರು ಆರೋಪಿಗಳನ್ನು ಪುತ್ತೂರು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸುನಿಲ್ ಕುಮಾರ್, ಸುರೇಶ್, ದಿನೇಶ್ ಬಂಧಿತ ಆರೋಪಿಗಳು. ಬನ್ಪು, ಅಂಡಿಪುನರ್, ಬೇಂಗ ಜಾತಿಯ ಮರಗಳ ತೊಗಟೆಯನ್ನು ಕೆತ್ತಿ ಕೊಂಡೊಯ್ಯಲಾಗಿದೆ. ತೊಗಟೆ ಕೆತ್ತುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ. ಬಂಧಿತರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


























