ಉಡುಪಿ : ಟಾಲಿವುಡ್ ಸ್ಟಾರ್ ಜೂನಿಯರ್ ಎನ್ಟಿಆರ್ ಕರಾವಳಿಯ ಸಸ್ಯ ಕಾಶಿ, ಬೆಟ್ಟ ಗುಡ್ಡಗಳು ನದಿ, ಸಮುದ್ರ ದೇಗುಲಗಳಿಗೆ ಮನಸೋತಿದ್ದಾರೆ. ಎರಡು ದಿನಗಳ ಕಾಲ ಉಡುಪಿಯ ದೇವಸ್ಥಾನಗಳಿಗೆ ಭೇಟಿಕೊಟ್ಟು ಗೆಳೆಯರ ಜೊತೆ ಸುತ್ತಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸದಲ್ಲಿರುವ ಜೂನಿಯರ್ ಎನ್ಟಿಆರ್ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದರು. ಇದೀಗ ಅಮ್ಮನ ಆಸೆ ತೀರಿಸಲು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕಾಡು, ಬಂಡೆ ನಡುವೆ ಇರುವ ಪ್ರಾಕೃತಿಕ ರಮಣೀಯತೆಗೆ ತಾರಕ್ ರಾಮ್ ಮಾರುಹೋಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ರಿಷಬ್ ಅವರ ಹುಟ್ಟೂರು, ಗ್ರಾಮವನ್ನು ಅವರು ಪರಿಚಯಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕುಟುಂಬ ಕೂಡಾ ಈ ವೇಳೆ ಜೊತೆಗಿದ್ದರು.