ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದ್ರೂ ಕೂಡಾ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳಗಳ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪ್ರತಿನಿತ್ಯ ಹೆಣ್ಣು ಮಕ್ಕಳು ಒಂದಲ್ಲಾ ಒಂದು ರೀತಿಯ ಕಿರುಕುಳಗಳನ್ನು ಎದುರಿಸುತ್ತಲೇ ಇರುತ್ತಾರೆ. ಹೆಚ್ಚಿನವರಿಗೆ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಅಥವಾ ಈ ಬಗ್ಗೆ ಇತರರ ಬಳಿ ಹೇಳಿಕೊಳ್ಳುವ ಧೈರ್ಯ ಇರೋದಿಲ್ಲ. ಆದ್ರೆ ಇಲ್ಲೊಂದಷ್ಟು ಸ್ಕೂಲ್ ಹುಡುಗೀರು ಜೊತೆ ಸೇರಿ, ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡುವುದಾಗಿ ಹೇಳಿದ ಅಂಗಡಿ ಮಾಲೀಕನನ್ನು ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಹುಡುಗೀರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆ ರಾಜಸ್ಥಾನದ ದಿದ್ವಾನಾ ಎಂಬಲ್ಲಿ ನಡೆದಿದ್ದು, ಒಂದಷ್ಟು ಸ್ಕೂಲ್ ಹುಡ್ಗೀರು ಐ ಲವ್ ಯು ಹೇಳುವಂತೆ ಪೀಡಿಸಿದಾತನಿಗೆ ನಡು ರಸ್ತೆಯಲ್ಲಿಯೇ ಚಳಿ ಬಿಡಿಸಿದ್ದಾರೆ.
ಸ್ಕೂಲ್ ಹುಡುಗೀರು ಮೊಬೈಲ್ ರೀಚಾರ್ಜ್ ಮಾಡಿಸಲೆಂದು ಮೊಬೈಲ್ ಶಾಪ್ಗೆ ಹೋಗಿದ್ದಾರೆ. ಆದ್ರೆ ಅಂಗಡಿ ಮಾಲೀಕ ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡಿಕೊಡುವುದಾಗಿ ಅವರನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ಹುಡುಗೀರು, ಆತನನನ್ನು ದರದರನೇ ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲಿಯೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.