ಹತ್ತೂರ ಭಕ್ತರ ಪೊರೆಯುವ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯ ನೆಲೆವೀಡು ಆಗಿರುವ ಪುತ್ತೂರಿನಲ್ಲಿ ತನ್ನ ಶಕ್ತಿಯಿಂದ ನಂಬಿದವರಿಗೆ ಇಂಬು ಕೊಡುತ್ತಾ , ದುಷ್ಟರನ್ನು ಶಿಕ್ಷಿಸುತ್ತಾ ಬಂದಿರುವ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವ ಕ್ಷೇತ್ರದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಕೆ.ಮಾಧವ ಗೌಡ ಕಾಂತಿಲ ಅಧ್ಯಕ್ಷರಾಗಿ ಆಯ್ಕೆಯಾದರು. ಉಳಿದಂತೆ ಅಶೋಕ್ ಕುಮಾರ್ ಉಜ್ರಿಪಾದೆ, ಶ್ರೀಮತಿ ಹರಿಣಿ, ಶ್ರೀಮತಿ ಸ್ವರ್ಣಲತ, ಶ್ರೀ ನಾರಾಯಣ ಪೂಜಾರಿ, ಭೋಜರಾಜ ಗೌಡ, ಶಾಮಣ್ಣ ನಾಯಕ್, ಕಿರಣ ಕುಮಾರ್ ರೈ ಅವರು ಸದಸ್ಯರಾಗಿ ಆಯ್ಕೆಗೊಂಡಿದ್ದು ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮುರಳಿಕೃಷ್ಣ ಹಸಂತ್ತಡ್ಕ, ಆಡಳಿತಾಧಿಕಾರಿ ರಾಮಣ್ಣ ನಾಯ್ಕ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.