ಪುತ್ತೂರು : ಫ್ಯಾಶನ್ ಲೋಕದ ಹೊಸ ಅನಾವರಣ ‘FASHION ZONE’ ಕಿಡ್ಸ್ & ಲೇಡೀಸ್ ವಸ್ತ್ರ ಮಳಿಗೆ ಸೆ.9 ರಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಪಿಂಗ್ ಸೆಂಟರ್ ನಲ್ಲಿ ನಡೆಯಲಿದೆ.
ನೂತನ ಮಳಿಗೆಯನ್ನು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ದೀಪಪ್ರಜ್ವಲಿಸಲಿದ್ದಾರೆ.
ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಹಿಂದೂ ಮುಖಂಡರಾದ ಮುರಳಿ ಕೃಷ್ಣ ಹಸಂತಡ್ಕ, ಕೇಶವಶ್ರೀ ಶಾಪಿಂಗ್ ಸೆಂಟರ್ ನ ಮಾಲಕರಾದ ಅಜಿತ್ ನಾಯಕ್, ಪ್ರಕಾಶ್ ನಾಯಕ್, ದರ್ಬೆ ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಸಾದಿಕ್ ಎಸ್.ಎಮ್., ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ, ಸಹಜ್ ರೈ ಬಳಜ್ಜ, ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ ನಡುಬೈಲ್, ಕಿರುತೆರೆ ನಟ ಸುರೇಶ್ ರೈ, ಸುಮಾ ಅಶೋಕ್ ರೈ, ಅನಿತಾ ಹೇಮಾನಾಥ್ ಶೆಟ್ಟಿ, ಚಲನಚಿತ್ರ ನಟಿ ರಚನಾ ರೈ ಅತಿಥಿಗಳಾಗಿ ಆಗಮಿಸಲಿದ್ದಾರೆ.