ಪುತ್ತೂರು : ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7 ರಂದು ನಡೆಯಲಿದೆ.
ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಸೆ.7 ರಂದು ಬೆಳಗ್ಗೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆಯಾಗಿ ಬಳಿಕ ಭಜನೆ, ವಿವಿಧ ಕಾರ್ಯಕ್ರಮ ನಡೆದು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ವೈಭವ ನಡೆದು ಬಳಿಕ ಮಹಾಪೂಜೆ ಜರುಗಿದ ನಂತರ ಸಂಜೆ ಶ್ರೀ ಗಣಪತಿ ದೇವರ ಶೋಭಾಯಾತ್ರೆ ಜರುಗಲಿದೆ.































