ಪುತ್ತೂರು : ದೇವತಾ ಸಮಿತಿ ಪುತ್ತೂರು ಇದರ ವತಿಯಿಂದ ಆಚರಿಸಲ್ಪಡುವ ಕಿಲ್ಲೆ ಮೈದಾನದ ಗಣೇಶೋತ್ಸವದ ಬಗೆಗಿನ ಮಾಹಿತಿಯನ್ನು ನೀಡುವ ಸಲುವಾಗಿ ಆಡಳಿತ ಮಂಡಳಿಯು ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಲು ಉದ್ದೇಶಿಸಿದ್ದು, ಸೆ.7 ಮಧ್ಯಾಹ್ನ ಪುತ್ತೂರು ಶಾಸಕರಾದ ಆಶೋಕ್ ಕುಮಾರ್ ರೈ ಯವರು ಲೋಕಾರ್ಪಣಾ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಈ ವೆಬ್ಸೈಟ್ ನಲ್ಲಿ ಗಣೇಶೋತ್ಸವದ ಬಗ್ಗೆ ಇತಿಹಾಸ, ಪೂಜಾ ಕಾರ್ಯಕ್ರಮಗಳು, ಲೇಖನಗಳು, ಸಂಸ್ಕೃತಿಕ ಕಾರ್ಯಕ್ರಮ, ಹಿಂದಿನ ಪೋಟೋಗಳ ಸಂಗ್ರಹಗಳ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ದೇವತಾ ಸಮಿತಿಯ ಅಧ್ಯಕ್ಷರಾದ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದ್ದಾರೆ.


























