ಪುತ್ತೂರು : ಬಪ್ಪಳಿಗೆ ನಿವಾಸಿ ಶರತ್ ರಾವ್ (47) ನಿಧನರಾದರು.

ಶರತ್ ರವರು ನೆಹರುನಗರದಲ್ಲಿ ದೇವಿಕ ಸ್ಟೋರ್ಸ್ ಹೊಂದಿದ್ದು, ಅಲ್ಪಕಾಲದ ಅಸೌಖ್ಯದಿಂದ ಡಯಾಲೀಸಿಸ್ ಗೆ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಬಿಸಿರೋಡ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ನಿಧನರಾದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.

























